ಬೇಕಾಗುವ ಸಾಮಾಗ್ರಿಗಳು:
- ಅರಿಸಿನ ಎಲೆಗಳು
- ಒಂದು ಪಾವು ಅಕ್ಕಿ
- ಎರಡು ಕಪ್ ತೆಂಗಿನತುರಿ
- ಒಂದು ಕಪ್ ಬೆಲ್ಲ
- ಅರ್ಧ ಚಮಚ ಏಲಕ್ಕಿ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
೧. ಅರಶಿಣ ಎಲೆಗಳನ್ನು ತೊಳೆದು ದಂಟು ಮತ್ತು ತುದಿಯನ್ನು ಕತ್ತರಿಸಿ.
೨. ಅಕ್ಕಿಯನ್ನು ಎರಡರಿಂದ ಮೂರು ಗಂಟೆಗಳ ಕಾಲ ನೆನೆಯಲು ಬಿಡಿ.
೩. ನಂತರ
ನೆನೆಸಿಟ್ಟ ಅಕ್ಕಿಯನ್ನು ಚೆನ್ನಾಗಿ ತೊಳೆದು ಸೋಸಿ, ಒಂದು ಕಪ್ ತೆಂಗಿನತುರಿಯೊಂದಿಗೆ
ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಂಡು, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ
ಹಿಟ್ಟನ್ನು ತಯಾರಿಸಿಕೊಳ್ಳಿ.
೪. ಪುಡಿಮಾಡಿದ ಬೆಲ್ಲದೊಂದಿಗೆ ಒಂದು ಕಪ್ ತೆಂಗಿನತುರಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಹೂರಣವನ್ನು ತಯಾರಿಸಿಕೊಳ್ಳಿ.
೫. ಅರಶಿಣ
ಎಲೆಗಳ ಮೇಲೆ ಒಂದು ಸೌಟು ಹಿಟ್ಟನ್ನು ತೆಳ್ಳಗೆ ಹರಡಿ ,ಮಧ್ಯ ಭಾಗದಲ್ಲಿ ಹೂರಣವನ್ನು
ಮೇಲಿಂದ ಕೆಳಗಿನವರೆಗೂ ಉದ್ದಕ್ಕೆ ತುಂಬಿ ನಿಧಾನವಾಗಿ ಮಡಚಿಡಿ.
೬. ಮಡಚಿಟ್ಟ ಎಲೆಗಳನ್ನು ಇಡ್ಲಿ ಪಾತ್ರೆಯಲ್ಲಿ ಇಟ್ಟು ಇಪ್ಪತ್ತು ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ.
Comments
Post a Comment