ರಾಗಿ ಮಣ್ಣಿ

Click on the link below for English Version
http://diycreativeindianarts.blogspot.in/2016/10/finger-millet-halwaragi-manni.html

ಬೇಕಾಗುವ ಸಾಮಾಗ್ರಿಗಳು
1. ರಾಗಿ - 1 ಕಪ್
2. ತೆಂಗಿನ ತುರಿ -1( ತೆಂಗಿನಕಾಯಿ)
 3. ತುರಿದ ಬೆಲ್ಲ - 1 ಕಪ್
 4. ಏಲಕ್ಕಿ - 5 ರಿಂದ6
5. ತುಪ್ಪ - 3 ಚಮಚ

 ಮಾಡುವ ವಿಧಾನ -
1. ರಾಗಿಯನ್ನು ನೀರಿನಲ್ಲಿ ಸೋಸಿ ಚೆನ್ನಾಗಿ ತೊಳೆಯಬೇಕು.


2. ತೊಳೆದ ರಾಗಿ,ತೆಂಗಿನ ತುರಿ ಮತ್ತು ನೀರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಬೇಕು.

3. ಜಾಲರಿಯಲ್ಲಿ ಸೋಸಿ , ತೆಂಗಿನಕಾಯಿ ಚೊಗಟೆ ಮತ್ತು ರುಬ್ಬಿದ ರಾಗಿಯನ್ನು ಬೇರ್ಪಡಿಸಬೇಕು.

4. ಸೋಸಿದ ಚೊಗಟೆ ಮತ್ತು ರುಬ್ಬಿದರಾಗಿಗೆ ಪುನಃ ಸ್ವಲ್ಪ ನೀರು ಸೇರಿಸಿ ರುಬ್ಬಿ,ಜಾಲರಿಯಲ್ಲಿ ಸೋಸಿ ರಾಗಿ ಹಾಲು ತೆಗೆಯಿರಿ.

5. ಏಲಕ್ಕಿಯನ್ನು ಸಕ್ಕರೆಯೊಂದಿಗೆ ಪುಡಿಮಾಡಬೇಕು.


5. ರಾಗಿ ಹಾಲನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು,ತುರಿದ ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.



6. ಬಿಡದೆ ಕೈಯಾಡಿಸಿ,ಮಿಶ್ರಣ ದಪ್ಪವಾಗುತ್ತ ಬರುತ್ತದೆ.(20 ರಿಂದ 25 ನಿಮಿಷ)

7. ತಟ್ಟೆಗೆ ತುಪ್ಪ ಸವರಿ,ಮಿಶ್ರಣ ಸುರಿಯಿರಿ.
8. ತಣ್ಣಗಾದ ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿ.

Also click below for to check how to make ಅಷ್ಟಮಿ ಲಾಡು

Comments