ಬ್ರೆಡ್ ಪಕೋಡ:

ಬೇಕಾಗುವ ಸಾಮಗ್ರಿಗಳು:

- ಬ್ರೆಡ್,
- ಕಡ್ಲೆ ಹಿಟ್ಟು1 ಕಪ್
- ಜೀರಿಗೆ 1 ಚಮಚ
- ಆಲುಗಡ್ಡೆ 3 ರಿಂದ 4
- ಇಂಗು - ಸ್ವಲ್ಪ
- ಉದ್ದಿನಬೇಳೆ - 1ಚಮಚ
- ಸಾಸಿವೆ - 1 ಚಮಚ
- ಕರಿಬೇವು - ಒಗ್ಗರಣೆಗೆ
- ಅರಿಶಿಣ ಪುಡಿ - 1/2ಚಮಚ
- ಕೊತ್ತಂಬರಿ ಸೊಪ್ಪು- ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು
- ಎಣ್ಣೆ - ಕರಿಯಲು.

ಮಾಡುವ ವಿಧಾನ:

- ಒಂದು ಪಾತ್ರೆಯಲ್ಲಿ ಕಡ್ಲೆ ಹಿಟ್ಟು, ಉಪ್ಪು , ಜೀರಿಗೆ ಮತ್ತು 1ಕಪ್ ನೀರನ್ನು ಹಾಕಿ ಮಿಶ್ರಣವನ್ನು ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
- ಆಲುಗಡ್ಡೆಯನ್ನು ಕುಕ್ಕರ್ ನಲ್ಲಿ ಬೇಯಿಸಿ, ಚೆನ್ನಾಗಿ ಹಿಸುಕಿಕೊಳ್ಳಿ. ಒಗ್ಗರಣೆಗೆ ಎಣ್ಣೆ,ಉದ್ದಿನಬೇಳೆ,ಸಾಸಿವೆ, ಕರಿಬೇವು, ಅರಿಶಿಣ ಪುಡಿ, ಇಂಗು ಹಾಕಿ, ಒಗ್ಗರಣೆಯನ್ನು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಿಸುಕಿದ ಆಲೂಗಡ್ಡೆ ಗೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
- ನಂತರ, ಒಂದೊಂದು  ಬ್ರೆಡ್ ನ್ನು ತ್ರಿಕೋನಾಕಾರವಾಗಿ ಎರಡು ತುಂಡುಗಳಾಗಿ ಕತ್ತರಿಸಿ, ಒಂದು ಬ್ರೆಡ್ ತುಂಡಿಗೆ ಆಲುಗಡ್ಡೆ ಮಿಶ್ರಣವನ್ನು ಹಾಕಿ, ಇನ್ನೊಂದು ಬ್ರೆಡ್ ತುಂಡಿನಿಂದ ಮುಚ್ಚಿ. ಅದನ್ನು,ಕಡ್ಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ತೆಗೆದು, ಕಾಯಿಸಿದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿದು ತೆಗೆಯಿರಿ.

Comments