ಅಷ್ಟಮಿ ಲಾಡು ಮಾಡುವ ವಿಧಾನ

ಬೇಕಾಗುವ  ಸಾಮಾಗ್ರಿಗಳು-

ಅಂಟು ಬೆಲ್ಲ:1 Kg


ಅರಳು ಹುಡಿ:200gm

ನೆಲಕಡಲೆ:100gm

ಗೇರುಬೀಜ:100gm

ಎಳ್ಳು(ಕಪ್ಪು ಹಾಗು ಬಿಳಿ):100gm(50+50)


ಕಡ್ಲೆಬೇಳೆ:250gm

ಏಲಕ್ಕಿ:10 to 12
:
              
 ಮಾಡುವ ವಿಧಾನ-
1.ಅಂಟು ಬೆಲ್ಲವನ್ನು ಪಾಕಕ್ಕೆ ಇಡಬೇಕು.ಬೆಲ್ಲ ಪಾಕಕ್ಕೆ ಇಡುವಾಗ ಸ್ವಲ್ಪ ನೀರು ಹಾಕಿ ಇಡಬೇಕು(30 ರಿಂದ 35 ನಿಮಿಷ)

2.ಕಡ್ಲೆ ಬೇಳೆ,ನೆಲಕಡಲೆ,ಗೇರುಬೀಜ,ಎಳ್ಳು  ಬೇರೆ ಬೇರೆಯಾಗಿ ಹುರಿಯಿರಿ.




3.ಹುರಿದ ನಂತರ ನೆಲಕಡಲೆ ಸಿಪ್ಪೆ ತೆಗೆದು ನೆಲಕಡಲೆ ಮತ್ತು ಗೇರುಬೀಜವನ್ನು ಸಣ್ಣ ತುಂಡು ಮಾಡಬೇಕು.

4.ಏಲಕ್ಕಿಯ ಸಿಪ್ಪೆ ತೆಗೆದು ಸಕ್ಕರೆಯೊಂದಿಗೆ ಹುಡಿ ಮಾಡಬೇಕು.

5.ಕಡ್ಲೆಬೇಳೆಯನ್ನು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ಹುಡಿ ಮಾಡಬೇಕು.(ನೀರು ಹಾಕಬಾರದು)

6.ಬೆಲ್ಲ ಪಾಕ ಬಂದಿದೆಯಂದು ಖಚಿತ ಪಡಿಸಿಕೊಳ್ಳಲು ಸ್ವಲ್ಪ ನೀರಿಗೆ ಬೆಲ್ಲರಸವನ್ನು ಹಾಕಿ ಬೆಲ್ಲ  ಮೇಲೆ ತೇಲಿದರೆ ಅಂಟು ಬಂದಿದೆ ಎಂದರ್ಥ.

7. ಪಾಕಕ್ಕೆ ಕಡ್ಲೆಬೇಳೆ ಹುಡಿ,ನೆಲಕಡಲೆ ಬೀಜ,ಗೇರುಬೀಜ ,ಎಳ್ಳು,ಏಲಕ್ಕಿ ಪುಡಿಯನ್ನು ಸೇರಿಸಬೇಕು.

8.ನಂತರ ಅರಳುಹುಡಿಯನ್ನು ಸೇರಿಸಬೇಕು.

 9.ಕೊನೆಯದಾಗಿ,ಕೈಗೆ ತುಪ್ಪ ಸವರಿ ಪಾಕ ಬಿಸಿಯಾಗಿರುವಾಗಲೇ ಲಾಡು ಕಟ್ಟಬೇಕು.

10.ನೀವು 70 ರಿಂದ 80 ಲಾಡು ಮಾಡಬಹುದು

Comments